ಏಲಕ್ಕಿಯನ್ನು ಕೇವಲ ಸುವಾಸನೆಗಾಗಿ ಮಾತ್ರ ಬಳಸುತ್ತಿದ್ದೇವೆ ಎಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ ಇದರಲ್ಲಿರುವ ಇತರ ಸದ್ಗುಣಗಳು ಬಹಳಷ್ಟಿವೆ...ಶರ್ಕರ ಪಿಷ್ಟಗಳು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ ಏಲಕ್ಕಿಯಲ್ಲಿ ಸಮೃದ್ಧವಾಗಿದೆ.
ಜೀರ್ಣಶಕ್ತಿಯನ್ನು ವೃದ್ಧಿಸುವಲ್ಲಿ ಏಲಕ್ಕಿ ಪಾತ್ರ ಅಪಾರ. ಅಜೀರ್ಣ, ಎದೆ ಉರಿ, ವಾತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ಸಂಜೀವಿನಿ ಇದ್ದಂತೆ. ಏಲಕ್ಕಿಯಿಂದ ಮಾಡಿದ ಚಹಾ ಅಜೀರ್ಣದ ಮೂಲವಾಗಿ ಉಂಟಾಗುವ ತಲೆನೋವಿಗೆ ರಾಮಬಾಣ ಇದ್ದಂತೆ. ಬಾಯಿಯ ದುರ್ವಾಸನೆ ಹೋಗಲಾಡಿಸಿಕೊಳ್ಳಲು ಏಲಕ್ಕಿಗಿಂತ ಉತ್ತಮ ಸುಗಂಧ ಮತ್ತೊಂದಿಲ್ಲ.
No comments:
Post a Comment