Friday, December 18, 2009

ಆಹಾ! ಶುದ್ಧಶುಂಠಿ ಚಟ್ನಿ



ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ತಾಜಾ ತೆಂಗಿನ ತುರಿ ಒಂದು ಕಪ್
ಅಂಗೈ ಅಗಲದ ಶುಂಠಿ ಕೊಂಬು
ಹಸಿರು ಮೆಣಸಿನ ಕಾಯಿ 6
ಗಟ್ಟಿ ಹುಣಸೇ ಹುಳಿ ಎರಡು ಚಮಚ
ಉಪ್ಪು
ಸ್ವಲ್ಪ ಬೆಲ್ಲ
ಒಗ್ಗರಣೆಗೆ ಎಣ್ಣೆ ಸಾಸಿವೆ

ತಯಾರಿಸುವ ವಿಧಾನ

ಕೈಯಲ್ಲಿ ಮುರಿದ ಶುಂಠಿ ಹೋಳುಗಳನ್ನು ನೀರಿನಲ್ಲಿ ಎಂಟು ಗಂಟೆಗಳ ಕಾಲ ಮುಳುಗಿಸಿ ಇಡಬೇಕು. ನಿಧಾನವಾಗಿ ಅದು ಮಣ್ಣು ಬಿಟ್ಟುಕೊಳ್ಳುತ್ತದೆ. ನೆನೆದ ಶುಂಠಿಯನ್ನು ನಲ್ಲಿ ನೀರು ಬಿಟ್ಟುಕೊಂಡು ಚೆನ್ನಾಗಿ ಉಜ್ಜಿ ಉಜ್ಜಿ ತೊಳೆಯಿರಿ. ನಂತರ ಕ್ಯಾರೆಟ್, ಒಣಕೊಬ್ಬರಿ ತುರಿಯುವ ಮಾದರಿಯಲ್ಲಿ ತುರಿಯೋಮಣೆಯ ದಪ್ಪ ಹಲ್ಲಿನ ಕಡೆಯಿಂದ ತುರಿದುಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಸಾಸಿವೆ ಚಟಪಟ ಅಂದನಂತರ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ಹಾಕಿ ನಾಕು ನಿಮಿಷ ಬಾಡಿಸಿ. ಇದನ್ನು ತೆಂಗಿನ ಕಾಯಿ,ಉಪ್ಪು ಮತ್ತು ಬೆಲ್ಲದೊಂದಿಗೆ ರುಬ್ಬಿ ಕೊಳ್ಳಿರಿ. ಚೆನ್ನಾಗಿ ನುರಿತ ನಂತರ ತುರಿದು ಇಟ್ಟುಕೊಂಡ ಶುಂಠಿಗೆ ಬೆರಸಿ ಚೆನ್ನಾಗಿ ಕಲಕಿರಿ. ಊಟಕ್ಕೆ ತಿಂಡಿಗೆ ಕುಳಿತಾಗ ಚಟ್ನಿಯ ಶೀಶೆ ಕೈಗೆಟಕುವಷ್ಟು ದೂರದಲ್ಲಿರಲಿ!

No comments:

Post a Comment