Wednesday, January 19, 2011

ಅವಿಭಕ್ತ ಕುಟುಂಬ


ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂದು
ಆಗೆಲ್ಲಾ ಒಂದು ಕುಟುಂಬವೆಂದರೆ ಕನಿಷ್ಟ ಇಪ್ಪತ್ತೈದು ಜನರಿರುತಿದ್ದರು ಅದೂ ಒಂದೇ ಮನೆಯಲ್ಲಿ. ಅಲ್ಲಿ ಅಜ್ಜ ಅಜ್ಜಿ, ಅಮ್ಮ ಅಪ್ಪ, ಚಿಕ್ಕಮ್ಮ ಚಿಕ್ಕಪ್ಪ ದೊಡ್ಡಪ್ಪ ದೊಡ್ಡಮ್ಮ ಅವರ ಮಕ್ಕಳು, ಇದ್ದರೆ ಅವರ ಮಕ್ಕಳು ಹೀಗೆ . ಊಟದ ಹೊತ್ತಿಗೆ ಎಲ್ಲರೂ ಸಾಲಾಗಿ ಕೂರುತ್ತಿದ್ದರು. ಹೀಗೆ ಅಮ್ಮ ಅವರ ಬಾಲ್ಯದ ನೆನೆಪನ್ನು ಹರಡುತಿದ್ದರೆ ಅ ಸಮಯ ಎಷ್ಟು ಸುಂದರ ಅನ್ನಿಸುತ್ತದೆ. ಆದರೆ ಈಗಿನ ಕೆಲವು ಅವಿಭಕ್ತ ಕುಟುಂಭಗಳು ನಮ್ಮ ಕಣ್ಣಾ ಮುಂದೆಯೇ ಕಿತ್ತಾಡಿ ಆಸ್ತಿಗಾಗಿ ಹೊಡೆದಾಡಿ , ಬಡಿದಾಡೊ, ಓರಗಿತ್ತಿಯರ ಕಿತ್ತಾಟಗಳ ನೋಡಿ ಹೊಂದಾಣಿಕೆ ನಿಜವಾಗಲೂ ಸಾಧ್ಯವೇ? ಎಂಬ ಅನುಮಾನ ದಟ್ಟವಾಗತೊಡಗಿವೆ.

ಅವಿಭಕ್ತ ಕುಟುಂಬ ವ್ಯವಸ್ಥೆಯಲಿ ಅನೇಕರ ತ್ಯಾಗ, ನಿಸ್ವಾರ್ಥ ಮನೆತನದ ಘನತೆಯನ್ನು ಹೆಚ್ಚಿಸುತ್ತವೆ.ಮನೆಯಲ್ಲಿ ಯಾರಾದರೂ ಚಿಕ್ಕ ಮಕ್ಕಳಿದ್ದರೆ ಅವುಗಳ ಆರೈಕೆಯನ್ನು ಮುದಿ ಜೀವಗಳು ಕೈಲಾಗುವವರೆಗೂ ಬಹಳವಾಗಿ ನಡೆಸಿಕೊಡುತ್ತಿದ್ದವು. ಮಕ್ಕ್ಳಿಗೆ ಕಥೆ-ಕವನ, ದೇವರ ಸ್ತೋತ್ರ ಇವುಗಳನ್ನೂ ನೀತಿ ಕಥೆ-ಪಂಚತಂತ್ರದ ಕಥೆ ಇವುಗಳನ್ನೆಲ್ಲಾ ಹೇಳುತ್ತಾ ಮುಂದಿನ ಪೀಳಿಗೆಗೆ ಬೇಕಾಗುವ ನೈತಿಕತೆಯನ್ನು ಆ ಮೂಲಕ ಕುಟುಂಬದ ಹಿರಿಯರು ಧಾರೆ ಎರೆಯುತ್ತಿದ್ದರು. ಇಂತಹ ಕುಟುಂಬಗಳಲ್ಲಿ ಬಟ್ಟೆ-ಬರೆ ಖರೀದಿ, ಹೆಂಗಸರಿಗೆ ಬೇಕಾಗುವ ಬಳೆ-ಓಲೆ ಇತ್ಯಾದಿ ಖರೀದಿ, ಮಕ್ಕಳ ಆಟಿಕೆ ಖರೀದಿ, ಶಾಲೆಗೆ ಹೋಗುವ ಒಂದೇ ಓರಗೆಯ [ಅಣ್ಣ-ತಮ್ಮಂದಿಅರ್ ಮಕ್ಕಳು]ಮಕ್ಕಳಿಗೆ ಪುಸ್ತಕಗಳ ಖರೀದಿ ಇವನ್ನೆಲ್ಲ ಒಟ್ಟಾಗಿ ಒಂದೇ ಸಲ ಮಾಡುತ್ತಿದ್ದರು. ಅಂಗಿ, ಸೀರೆ, ಮಕ್ಕಳ ಅಂಗಿ ಇಂತಹ ಬಟ್ಟೆಗಳನ್ನು ಸ್ಕೂಲ್ ಯೂನಿಫಾರ್ಮ್ ಇದ್ದಹಾಗೇ ಪನ್ನಾ ಲೆಕ್ಕದಲ್ಲಿ ಒಟ್ಟಿಗೇ ಖರೀದಿಸಿ ಅಮೇಲೆ ಅವರವರ ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುತ್ತಿದ್ದರು. ಕೇವಲ ವರ್ಷಕ್ಕೊಂದಾವರ್ತಿ ಜವಳಿ ತರುವುದು ಅಂತಲೇ ಇರುತ್ತಿತ್ತು. ಮನೆಯ ಯಾರಿಗೇ ಯಾವುದೇ ಹೆಚ್ಚು-ಕಮ್ಮಿ ಎನಿಸಿದರೂ ಹೊಂದಾಣಿಕೆಯೇ ಜೀವನದ ಸೂತ್ರವಾಗಿತ್ತು. ವಸ್ತು-ಒಡವೆಗಳನ್ನು ಸಂಖ್ಯೆಯಲ್ಲಿ ಕಮ್ಮಿ ಇದ್ದರೆ ಯಾರದರೂ ಉದಾರವಾಗಿ ಅದನ್ನು ಕೆಲವರು ಬಳಸಿಕೊಳ್ಳಲಿ ಎಂದು ಸುಮ್ಮನಿರುತ್ತಿದ್ದರು.

ಭಾರತ ಹಲವು ಶತಮಾನಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಎಂಬ ರೂಢಿಗತ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ತಂದೆ-ತಾಯಿ, ಅವರ ಮಕ್ಕಳು,ಮಕ್ಕಳ ಪತ್ನಿಯರು, ಮೊಮ್ಮಕ್ಕಳು, ಮರಿಮಕ್ಕಳು.. ಪೀಳಿಗೆಗಳು ಹೀಗೆ ಬೆಳೆಯುತ್ತಾ ಹೋಗುವ ಈ ವ್ಯವಸ್ಥೆಯಲ್ಲಿ ಒಂದೇ ಕುಟುಂಬದಲ್ಲಿ ಹಲವು ಪೀಳಿಗೆಯ ಜನ ಒಟ್ಟಿಗೇ ವಾಸಿಸುತ್ತಾರೆ. ಕುಟುಂಬದ ಅತ್ಯಂತ ಹಿರಿಯ ವ್ಯಕ್ತಿ, ಸಾಮಾನ್ಯವಾಗಿ ಪುರುಷ ಈ ಅವಿಭಕ್ತ ಕುಟುಂಬದ ಮುಖ್ಯಸ್ಥ. ಇವನು ಕುಟುಂಬದ ಒಳಗೆ ಬಹಳ ಮುಖ್ಯವಾದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವವನೂ, ನೀತಿ-ನಿಯಮಗಳನ್ನು ರೂಪಿಸುವವನೂ ಆಗಿರುತ್ತಾನೆ. ಕುಟುಂಬದ ಇತರ ಸದಸ್ಯರೆಲ್ಲರೂ ಇದಕ್ಕೆ ಬದ್ಧರಾಗಿರುತ್ತಾರೆ.

No comments:

Post a Comment