Tuesday, January 11, 2011

ಗರಿಕೆ ಆರೋಗ್ಯಕ್ಕೆ ಉಪಯೋಗ ಹೇಗೆ ?


ದೂರ್ವಾಯುಗ್ಮಂ ಪೂಜಾಯಾಮಿ... ಅನೆಮುಖದ ಪ್ರಥಮ ಪೂಜ್ಯ ಗಣಪನಿಗೆ ಗರಿಕೆ ಅತಿಪ್ರಿಯವಾದ ಆಹಾರ. ಇತ್ತೀಚೆಗೆ ನಗರದ ದೇಗುಲದಲ್ಲಿ ಅವಿರತವಾಗಿ ನಡೆದುಕೊಂಡಿರುವ ಎರಡು ಪೂಜೆಗಳೆಂದರೆ ಒಂದು ಹುಣ್ಣಿಮೆಯಂದು ಶ್ರೀಸತ್ಯನಾರಾಯಣ ಪೂಜೆ ಇನ್ನೊಂದು ಚೌತಿಯಂದು ಸಂಕಷ್ಟಹರ ಚತುರ್ಥಿಪೂಜೆ.

ಭಕ್ತಾದಿಗಳಲ್ಲಿ ಅದರಲ್ಲೂ ಯುವಕ ಯುವತಿಯರಿಗೆ ಗಣೇಶನ ಮೇಲೆ ಭಕ್ತಿ, ಪ್ರೀತಿ ಹೆಚ್ಚು. ಕೆಲಸ, ಪ್ರೀತಿ, ದುಡ್ದು ಹೀಗೆ ಯಾವುದೇ ಬೇಕೆನಿಸಿದರೂ ಮೊದಲ ಅಪ್ಲಿಕೇಷನ್ ಗಣೇಶನಿಗೆ ತಲುಪುತ್ತದೆ. ಗಣೇಶನಿಗೆ ಅರ್ಜಿ ಹಾಕಲು ಹೂವು ಹಣ್ಣು ತೆಗೆದುಕೊಂಡು ಹೋದರೆ ಪ್ರಯೋಜನವಿಲ್ಲ. ಏಕದಂತನಿಗೆ ಗರಿಕೆ ಅಥವಾ ತೆಂಗಿನಕಾಯಿ ನೀಡಿದರೆ ಮಾತ್ರ ಆತ ಒಲಿಯುತ್ತಾನೆ.

ಸೋ, ಚೌತಿ ದಿನದಂದು ಗರಿಕೆಗಾಗಿ ಯುವಕ, ಯುವತಿಯರು ಹುಡುಕಾಡುವುದು ಸಾಮಾನ್ಯವಾಗಿದೆ. ಕೆಲವರು ಗರಿಕೆ ಗುರುತಿಸಲು ಕಷ್ಟವೆಂದೋ ಅಥವಾ ನಮಗ್ಯಾಕೆ ಕಷ್ಟ ಎಂದೋ ಹೂವಾಡಿಗರಿಗೆ ಗರಿಕೆ ತಂದು ಕೊಡಲು ಹೇಳಿಬಿಡುತ್ತಾರೆ. 21 ಗರಿಕೆ ಕಟ್ಟುಗೆ ಇಂತಿಷ್ಟು ದುಡ್ಡು ಎಂದು ನೀಡಿದರೆ ಆಯಿತು. ನಂತರ ಆ ಗರಿಕೆ ಗಣಪನ ಅಲಂಕಾರಕ್ಕೆ ಮೀಸಲು.

ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆ ಯಾಗುತ್ತದೆ.

ಉಪಯೋಗಗಳು:

* ಅರಿಶಿನ ಸುಣ್ಣ ಮತ್ತು ಗರಿಕೆ ಹುಲ್ಲನ್ನು ಚೆನ್ನಾಗಿ ಹಿಚುಕಿ ಉಗುರು ಸುತ್ತಿಗೆ ಪಟ್ಟು ಹಾಕಿದರೆ ಗುಣವಾಗುತ್ತದೆ.
* ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸಲು, ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ಒಂದು ಬಟ್ಟಲಷ್ಟು ನೀರಿನ ಜೊತೆ ಬೆರೆಸಿ ಮಿಕ್ಸಿಗೆ ಹಾಕಿ ಅರೆಯಿರಿ. ನಂತರ ರಸವನ್ನು ಸೋಸಿಕೊಂಡು ಕುಡಿಯಿರಿ.ಇದೇ ರೀತಿ ಸುಮಾರು 40-45 ದಿನಗಳ ಕಾಲ ಕುಡಿದರೆ ರಕ್ತ ಶುದ್ಧೀಕರಣಗೊಂಡು ರೋಗಗಳು ದೂರಾಗುತ್ತವೆ.
* ಮೈಕೈ ನೋವು ನಿವಾರಣೆಗೆ, ತೊಳೆದ ಗರಿಕೆ ಹುಲ್ಲನ್ನು ಎರಡು ಲೋಟ ಪ್ರಮಾಣದ ನೀರಿಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿರಿ. ಕಾದ ನೀರನ್ನು ಸ್ನಾನದ ನೀರಿನೊಡನೆ ಸೇರಿಸಿ ಸ್ನಾನ ಮಾಡಿ.

No comments:

Post a Comment