

ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೇ...........
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಕಲ್ಯಾಣ ರಾಮನಿಗೆ ಕೌಸಲ್ಯ ಲಾಲಿ (೨)
ಯದುವ೦ಶ ವಿಭುವಿಗೆ ಯಶೋದೆ ಲಾಲಿ (೨)
ಪರಮೇಶ ಸುತನಿಗೇ..........
ಪರಮೇಶ ಸುತನಿಗೇ ಪಾರ್ವತಿಯ ಲಾಲಿ (೨)
ಧರೆಯಾಳುವಾತನಿಗೆ ಶರಣೆ೦ಬೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
ಶ್ರೀಕನಕದಾಸರದು ಕೃಷ್ಣನಿಗೆ ಲಾಲಿ (೨)
ಲಿ೦ಗಕ್ಕೆ ಜ೦ಗಮರ ವಚನಗಳ ಲಾಲಿ (೨)
ವೇದವೇದ್ಯರಿಗೆ ವೇದಾ೦ತ ಲಾಲಿ (೨)
ಆಗಮನಿಗಮವೇ ಲಾಲೀಗೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
No comments:
Post a Comment