Monday, December 13, 2010
ಆಚರಿಸಿ, ಆನಂದಿಸಿ, ಆರೋಗ್ಯವಂತರಾಗಿ
ಎಲ್ಲರಿಗೂ ಗೊತ್ತಿರುವ ಆದರೆ, ಎಲ್ಲರೂ ಉದಾಸೀನ ಮಾಡುವ ಕೆಲವು ಆರೋಗ್ಯ ಸಲಹೆಗಳು ಇಲ್ಲಿವೆ. ಈ ಸಲಹೆಗಳು ನೆಟ್ ಲೋಕದಲ್ಲಿ ವಿಹರಿಸುವಷ್ಟು ಬೇಗ ಆಚರಣೆಗೆ ಬರುವುದಿಲ್ಲ ಎಂಬುದು ಸತ್ಯ ಸಂಗತಿ. ದೈನಂದಿನ ನಮ್ಮ ನಿತ್ಯಕರ್ಮಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ, ಮುಂಬರುವ ಅಪಾಯವನ್ನು ತಡೆಗಟ್ಟಬಹುದು
ಕೆಲವು ಉಪಯುಕ್ತ ಸಲಹೆಗಳು:
* ಮೊಬೈಲ್ ಫೋನ್, ಸ್ಥಿರ ದೂರವಾಣಿ ಕರೆಗಳು ಬಂದಾಗ ಎಡ ಕಿವಿಗೆ ರಿಸೀವರ್ ಇಟ್ಟು ಆಲಿಸಿ.
*ಅತಿಯಾದ ಕೆಫೀನ್ ಅಂಶವುಳ್ಳ ಕಾಫೀ, ಟೀ ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಬೇಡವೇ ಬೇಡ.
*ತಣ್ಣನೆಯ ನೀರಿನ ಜೊತೆ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
*ಮಾತ್ರೆ ನುಂಗಿದ ಮರುಕ್ಷಣವೇ ಹಾಸಿಗೆ ಮೇಲೆ ಬಿದ್ದು ಹೊರಳಬೇಡಿ.
*ಎಣ್ಣೆ ಪದಾರ್ಥಗಳು, ಜಂಕ್ ಫುಡ್ ಗಳ ಬಳಕೆ ಕಮ್ಮಿ ಮಾಡಿ. ಸಾಧ್ಯವಾದರೆ ವರ್ಜಿಸಿ.
*ಮಲಬದ್ಧತೆ, ಗ್ಯಾಸ್ ಪ್ರಾಬ್ಲಂಗೆ ನಡಿಗೆ ರಾಮಬಾಣ. ಅದಷ್ಟು ಕಾಲ, ಆದಷ್ಟು ದೂರ ಕಾಲು ಸವೆಸಿ.
*ಸಂಜೆ ಐದರ ನಂತರ ಭಾರಿ ಭೋಜನ ಸರ್ವಥಾ ಸಾಧುವಲ್ಲ.
*ಮುಂಜಾನೆಯೆದ್ದು ಶುದ್ಧ ನೀರು ಕುಡಿಯಿರಿ, ಉಂಡ ಮೇಲೆ ನೂರು ಹೆಜ್ಜೆ ಓಡಾಡಿ.
*ಹೆಡ್ ಫೋನ್ /ಹಿಯರ್ ಫೋನ್ ಗಳ ಬಳಸಿ ಹೆಚ್ಚು ಹೊತ್ತು ಸಂಗೀತ ಆಲಿಸುತ್ತಾ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
*ರಾತ್ರಿ ಹತ್ತಕ್ಕೆ ಮಲಗಿ ಬೆಳಗ್ಗೆ 6 ಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ.ಚಿಕ್ಕಮಕ್ಕಳಿಗೆ ಹೆಚ್ಚು ಹೊತ್ತು ನಿದ್ರೆ ಅವಶ್ಯ.
*ಮೊಬೈಲ್ ಫೋನ್ ಬ್ಯಾಟರಿ ಡೌನ್ ಇರುವ ಸಮಯದಲ್ಲಿ ಹೆಚ್ಚು ಹೊತ್ತು ಕರೆ ಸ್ವೀಕರಿಸಬೇಡಿ, ಅಥವಾ ಕರೆ ಮಾಡಬೇಡಿ. ಈ ಸಮಯದಲ್ಲಿ ವಿಕರಣಗಳ ಪ್ರಭಾವ ಹೆಚ್ಚಿರುತ್ತದೆ.
*ದಿನದಲ್ಲಿ ಕನಿಷ್ಠ ಒಂದರ್ಧ ಗಂಟೆಗಾಲ ನಿಮ್ಮ ಇಷ್ಟದ ದೇವರನ್ನು, ಭೂತಗಣವನ್ನೋ ಪ್ರಾರ್ಥಿಸಿ. ಅಥವಾ ಧ್ಯಾನಾಸಕ್ತರಾಗಿ.
* ನಿತ್ಯಾನಂದ ನ ರೀತಿ ಸದಾ ಮುಗುಳ್ನಗೆ ಸೂಸುತ್ತಿರಿ :). ನಿಮ್ಮ ಮುಖದ ಸೌಂದರ್ಯಕ್ಕೆ ನಗುವಿಗಿಂತ ಹೆಚ್ಚಿನ ಕಸರತ್ತು ಮತ್ತೊಂದಿಲ್ಲ.
Subscribe to:
Post Comments (Atom)
No comments:
Post a Comment