ಅಡುಗೆ ಮಾಡುವುದು ಅದ್ಭುತ ಕಲೆ. ಅಡುಗೆ ಮನೆಯನ್ನು ನೀಟಾಗಿಟ್ಟುಕೊಳ್ಳುವುದು ಮತ್ತು ಅಡುಗೆ ಪದಾರ್ಥಗಳನ್ನು ಕೆಡದಂತೆ ಬಳಸುವುದು ಕೂಡ ಒಂದು ಕಲೆಯೇ
೧. ದೋಸೆ ಮಾಡುವಾಗ ದೋಸೆ ಕಾವಲಿಗೆ ಕಚ್ಚುತ್ತಿದ್ದರೆ ಒಂದು ಈರುಳ್ಳಿಯನ್ನು 1/2 ಮಾಡಿ ಕಾವಲಿಗೆ ತಿಕ್ಕಿ ದೋಸೆ ಹುಯ್ಯಿರಿ .
೨. ಟೀ ಮಾಡುವಾಗ ಸ್ವಲ್ಪ ಏಲಕ್ಕಿ ಪುಡಿ ಹಾಕಿದರೆ ಘಮ್ಮನೆಯ ಚಹಾ ಮತ್ತಷ್ಟು ರುಚಿ ಪಡೆಯುತ್ತದೆ.ಟೀ ಮಾಡುವಾಗ ನೀರು ಹಾಕಿ ಟೀ ಮಾಡುವ ಬದಲು, ಹಾಲನ್ನೇ ಇಟ್ಟು ಅದಕ್ಕೆ ಟೀ ಪುಡಿ ಹಾಕಿ ಮಾಡಿದರೆ ತುಂಬಾ ಚೆನ್ನಾಗಿರುವುದು .
೩. ತರಕಾರಿ ಬಾಡಿದ ಹಾಗಿದ್ದರೆ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ತರಕಾರಿಗಳನ್ನು 1/2 ಗಂಟೆ ಮುಳುಗಿಸಿಡಿ. ಮತ್ತೆ ಹೊಸದರಂತೆ ಹಾಗುತ್ತದೆ.
No comments:
Post a Comment