ಹಣ್ಣುಗಳನ್ನು ಯಾರು ಇಷ್ಟಪಡುವುದಿಲ್ಲ? ಪ್ರಕೃತಿಜನ್ಯವಾಗಿ ದೊರೆಯುವ ಅನೇಕ ಹಣ್ಣುಗಳನ್ನು ಈ ದುಬಾರಿ ಕಾಲದಲ್ಲಿ ಎಷ್ಟೇ ದುಡ್ಡು ತೆತ್ತಾದರೂ ಸರಿ ತಿನ್ನುವುದನ್ನು ಬಿಡುವುದಿಲ್ಲ. ಊಟವಾದನಂತರ ಹಣ್ಣು ಹೊಟ್ಟೆಗಿಳಿಸದಿದ್ದರೆ ತಿಂದದ್ದು ಅರಗುವುದಿಲ್ಲ ಎಂದು ತಿಂದೇ ತಿನ್ನುತ್ತೇವೆ. ಕೆಲವರಿಗೆ ಕೆಲವು ಹಣ್ಣುಗಳನ್ನು ಕಂಡರೆ ಅಲರ್ಜಿ ಇದ್ದರೂ ತಾವು ಇಷ್ಟಪಡುವ ಹಣ್ಣುಗಳನ್ನು ಕಷ್ಟಪಟ್ಟಾದರೂ ಸರಿ ತಿಂದೇ ತಿನ್ನುತ್ತಾರೆ. ಆದರೆ ಹಣ್ಣುಗಳನ್ನು ಯಾವಾಗ ತಿನ್ನಬೇಕು?
ಜಠರದಲ್ಲಿ ಸೇರಿದ ಆಹಾರದ ಜೊತೆ ಹಣ್ಣು ಕೂಡ ಸೇರುತ್ತಿದ್ದಂತೆ ಹೆಚ್ಚಿನ ಆಮ್ಲ ಬಿಡುಗಡೆಯಾಗಿ ಮೇಲಿನ ತಳಮಳಗಳು ಪ್ರಾರಂಭವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ತಿಂದರೆ ಅದು ಜಠರದ ಮೂಲಕ ನೇರವಾಗಿ ಸಣ್ಣಕರುಳನ್ನು ಸೇರುತ್ತದೆ. ಊಟವಾದ ಮೇಲೆ ತಿಂದರೆ ಸಣ್ಣಕರುಳಿಗೆ ನೇರವಾಗಿ ಸೇರದೆ ಆಹಾರದೊಡನೆ ಕೂಡಿ ಹೊಟ್ಟೆಯೂ ಹಾಳು, ಆರೋಗ್ಯವೂ ಹಾಳು.
ಖಾಲಿ ಹೊಟ್ಟೆಯಲ್ಲಿ ತಿಂದರೆ ಅನೇಕ ಪ್ರಯೋಜನಗಳಿವೆ. ಹಣ್ಣುಗಳು ನಮ್ಮ ಪಚನಕ್ರಿಯೆಯನ್ನು ಸರಳವಾಗಿಸುತ್ತವೆ. ಜಠರದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ. ಚೈತನ್ಯದ ಚಿಲುಮೆಯನ್ನಾಗಿ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣು ತಿಂದರೆ ಕೂದಲು ಬೇಗನೆ ನೆರೆಯುವುದನ್ನು, ತಲೆ ಬೋಳಾಗುವುದನ್ನು, ಕಣ್ಣಿನ ಸುತ್ತ ಕಪ್ಪು ಕಲೆಗಳಾಗುವುದನ್ನು, ಬೇಗನೆ ಸುಸ್ತಾಗುವುದನ್ನು ತಪ್ಪಿಸುತ್ತದೆ .
No comments:
Post a Comment