Monday, August 9, 2010

ಸ್ಪೂರ್ಥಿಸೆಲೆ 9-Aug-10

ಸತ್ಯ ತಿಳಿಯುವುದು ಜ್ಞಾನ ಮಾರ್ಗ ,
ಸತ್ಯವನ್ನು ನಂಬುವುದು ಭಕ್ತಿ ಮಾರ್ಗ ,
ಸತ್ಯಪಥದಲ್ಲಿ ನಡೆಯುವುದು ಮುಕ್ತಿಮಾರ್ಗ .

Friday, August 6, 2010

ಸ್ಪೂರ್ಥಿಸೆಲೆ 6-Aug-10

ನೀವು ಯಶಸ್ಸಿನ ಉತ್ತುಂಗದಲ್ಲಿರುವಾಗ ಹಿತೈಷಿಗಲೆಲ್ಲನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಾರೆ . ನೀವು ಕಷ್ಟದ್ದಲ್ಲಿದ್ದಾಗ ಮಾತನಾಡಿಸುವವರು ಮಾತ್ರ ನಿಜವಾದ ಹಿತೈಷಿಗಳು .

Monday, August 2, 2010

ಸ್ಪೂರ್ಥಿಸೆಲೆ 2-Aug-10

ವಿನಾಶಕ್ಕೆ ಹೇತುವಾಗುವುದು ಅಹಂಕಾರ .
ಉನ್ನತಿಗೆ ದಾರಿ ತೋರುವುದು ವಿನಯ .

Friday, July 30, 2010

ಸ್ಪೂರ್ಥಿಸೆಲೆ 30-Jul-10

ಯಶಸ್ವಿ ವ್ಯಕ್ತಿಗಳಿಗೆ ಮೌನ ಹಾಗೂ ನಗುವಿನ ಮಹತ್ವ ಚೆನ್ನಾಗಿ ತಿಳಿದಿರುತ್ತದೆ . ಸಮಸ್ಯೆ ಪರಿಹರಿಸಲು ನಗುತ್ತಾರೆ ಹಾಗೂ ಸಮಸ್ಯೆ ಎದುರಾಗದಂತೆ ತಡೆಯಲು ಮೌನ ವಹಿಸುತ್ತಾರೆ . ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡವರು ಯಶಸ್ವಿಯಾಗುತ್ತಾರೆ .

Wednesday, July 28, 2010

ಸ್ಪೂರ್ಥಿಸೆಲೆ 28-Jul-10

ನಾವು ಪ್ರತಿದಿನ ಹೇಗೆ ಕಳೆಯುತ್ತೇವೆ ಎಂಬುದನ್ನು ಆಧರಿಸಿ ನಮ್ಮ ಬದುಕನ್ನು ಹೇಗೆ ಕಳೆಯುತ್ತೇವೆ ಎಂಬುದನ್ನು ನಿರ್ಧರಿಸಬಹುದು . ಅದ್ದರಿಂದ ಪ್ರತಿದಿನವನ್ನು ಸಾರ್ಥಕವಾಗುವಂತೆ ಕಳೆಯೋಣ . ಆಗ ಬದುಕು ಸಾರ್ಥಕವಾಗಬಹುದು .

Tuesday, July 27, 2010

ಸ್ಪೂರ್ಥಿಸೆಲೆ 27-Jul-10

ನಮ್ಮ ಕೋಪ ಎಷ್ಟು ದುಬಾರಿ ಅಗಿರಬೇಕೆಂದರೆ ಯಾರು ಕೊಂಡುಕೊಳ್ಳಲೇ ಬಾರದು . ನಮ್ಮ ನಗು ಹೇಗಿರಬೇಕೆಂದರೆ ಎಲ್ಲರಿಗು ಉಚಿತವಾಗಿ ಸಿಗುವಂತಿರಬೇಕು.

Wednesday, July 21, 2010

ಸ್ಪೂರ್ಥಿಸೆಲೆ 21-Jul-10

ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಎಂಬುದು ಮುಖ್ಯ ಅಲ್ಲ . ಅಲ್ಲಿ ಇರುವ ಸ್ನೇಹಿತರನ್ನು ಹೇಗೆ ಇಟ್ಟು ಕೊಂಡಿದ್ದಿರಿ , ಅವರ ಜತೆ ಎಷ್ಟು ಉತ್ತಮ ಸಂಬಂಧ ಹೊಂದಿದ್ದೀರಿ ಎಂಬುದು ಮುಖ್ಯ . ಉತ್ತಮ ಸ್ನೇಹಿತರು ನಿಮ್ಮ ಬದುಕಿಗೆ ಇನ್ನೂ ಹೆಚ್ಹಿನ ಅರ್ಥ ಹಾಗೂ ಮಹತ್ವವನ್ನು ಹೆಚ್ಹು ಮಾಡಬಲ್ಲರು .