Wednesday, June 30, 2010

ಸ್ಪೂರ್ಥಿಸೆಲೆ 30-Jun-10

ಪ್ರತಿಯೊಬ್ಬರೂ ನದಿಯಿಂದ ನೀರನ್ನು ತೆಗೆದುಕೊಂಡು ಹೋದರೂ ಅದೇನೂ ಬತ್ತಿ ಹೋಗುವುದಿಲ್ಲ . ಮೊದಲಿಗಿಂತ ರಭಸವಾಗಿ ಹರಿಯುತ್ತದೆ . ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವೇನೂ ಖಾಲಿ ಆಗುವುದಿಲ್ಲ . ಮೊದಲಿಗಿಂತ ಹೆಚ್ಚು ಬಲಿಷ್ಟರಾಗುತ್ತಿರಿ

Monday, June 28, 2010

ಸ್ಪೂರ್ಥಿಸೆಲೆ 28-Jun-10

ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದಕ್ಕಿಂತ ಅದಕ್ಕೆ ಕಾರಣವೇ ನೀವಾಗಿ . ಬೇರೆಯವರ ದುಃಖಕ್ಕೆ ಕಾರಣವಾಗುವುದಕ್ಕಿಂತ ಅದರಲ್ಲಿ ಭಾಗಿಯಾಗಿ . ಇವೆರಡರಲ್ಲಿ ಸಿಗುವ ಸಮಾಧಾನ ಸಂತಸ ಅಷ್ಟಿಷ್ಟಲ್ಲ

Tuesday, June 22, 2010

ಸ್ಪೂರ್ಥಿಸೆಲೆ 22-Jun-10

ನಾವು ಸದಾ ಯೋಚಿಸುತ್ತೇವೆ ನಾವೇ ಸರಿ , ಬೇರೆಯವರು ತಪ್ಪೆಂದು . ಆದರೆ ಒಂದು ಕ್ಷಣ ಯೋಚಿಸಿ ನಾವು ತಪ್ಪು ಹಾಗು ಬೇರೆಯವರು ಸರಿ ಎಂದು ಇದರಿಂದ ನಾವು ಬೇರೆಯವರಿಂದ ಅಗಾಧವಾದುದನ್ನು ಕಲಿಯಲು ಸಾಧ್ಯವಾಗುತ್ತದೆ .

Wednesday, June 16, 2010

ಸ್ಪೂರ್ಥಿಸೆಲೆ 16-Jun-10

ಪ್ರಯಾಸ ಪಡದೆ ಪ್ರಯಾಗ ಸಿಕ್ಕದು . ತೃಪ್ತಿಯೇ ಸೌಭಾಗ್ಯ , ಅತೃಪ್ತಿಯೇ ದಾರಿದ್ರ್ಯ , ಗುಣವಿಲ್ಲದವನ ಐಶ್ವರ್ಯ ತಿಪ್ಪೇ ಮೇಲಿನ ಕಸ .

Monday, June 7, 2010

ಸ್ಪೂರ್ಥಿಸೆಲೆ 7-Jun-10

ಗೆಲುವು ಅಂದ್ರೆ ಕೆಲವು ಸರಳ ಕೆಲಸಗಳನ್ನು ಪ್ರತಿನಿತ್ಯ ಶಿಸ್ತಿನಿಂದ ಮಾಡುವುದು .
ಸೋಲು ಅಂದ್ರೆ ಸಣ್ಣ ಪುಟ್ಟ ತಪ್ಪುಗಳನ್ನು ಪ್ರತೀದಿನ ಪದೇ ಪದೇ ಮಾಡುವುದು .
ಇವೆರಡರ ನಡುವಿನ ವ್ಯತ್ಯಾಸ್ಯ ಗೊತ್ತಿದ್ದರೆ ಸದಾ ಯಶಸ್ಸನ್ನು ಗಳಿಸಬಹುದು .

Friday, June 4, 2010

ಸ್ಪೂರ್ಥಿಸೆಲೆ 4-Jun-10

ಮೊಂಬತ್ತಿಯ ಅಕಾರ , ಗಾತ್ರ , ಬೇರೆ ಬೇರೆ ಯಾಗಿರಬಹುದು . ಆದರೆ ಅದು ನೀಡುವ ಬೆಳಕು ಮಾತ್ರ ಒಂದೇ . ನೀವಿರುವ ಹುದ್ದೆ , ಸ್ಥಾನಮಾನ ಬೇರೆ ಬೇರೆಯಾಗಿರಬಹುದು . ಆದರೆ ಮಾಡುವ ಕೆಲಸ ಮುಖ್ಯ . ಅದು ಬೆಳಕು ನೀಡುವಂತಿದ್ದರೆ ಸಾಕು .